ಎಂ. ಎಸ್. ಆಶಾದೇವಿ, ಕನ್ನಡ ಭಾಷೆಯ ಈಗಿನ ಪ್ರಮುಖ ವಿಮರ್ಶಕಿ, ಲೇಖಕಿ, ಅನುವಾದಕಿ ಮತ್ತು ಪ್ರಾಧ್ಯಾಪಕಿ. ಮಹಿಳಾವಾದದ ನೆಲೆಯಲ್ಲಿ ಸಾಹಿತ್ಯವನ್ನು ಪರಾಂಬರಿಸುವ ಆಶಾದೇವಿ ಅವರಿಗೆ ೨೦೨೦ನೇ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿ ದೊರೆತಿದೆ. == ಶಿಕ್ಷಣ == ಕನ್ನಡದಲ್ಲಿ ಎಂ.ಎ ಹಾಗೂ ‘ನವೋದಯ ವಿಮರ್ಶೆಯ ಮೇಲೆ ಪಾಶ್ಚಾತ್ಯ ವಿಮರ್ಶೆಯ ಪ್ರಭಾವ’ ಎನ್ನುವ ವಿಷಯದ ಮೇಲೆ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. == ಅಂಕಣ == ಪ್ರಜಾವಾಣಿಯ ಭಾನುವಾರದ ಪುರವಣಿ 'ಮುಕ್ತಛಂದ'ದಲ್ಲಿ ನಾರಿಕೇಳಾ ಎಂಬ ಅಂಕಣವನ್ನು ಬರೆಯುತ್ತಿದ್ದರು. ಈ ಅಂಕಣದಲ್ಲಿ ಅವರು ಸ್ತ್ರೀವಾದದ ಬಗ್ಗೆ ಬರೆಯುತ್ತಿದ್ದರು. == ಕೃತಿಗಳು == ೧. ಸ್ತ್ರೀಮತವನುತ್ತರಿಸಲಾಗದೆ ? (ಸಾಹಿತ್ಯ- ಸಂಸ್ಕೃತಿಯನ್ನು ಕುರಿತ ಲೇಖನಗಳ ಸಂಗ್ರಹ) ೨. ಹುದುಗಲಾರದ ದುಃಖ.(ಅನುವಾದ) ೩. ನಡುವೆ ಸುಳಿವ ಆತ್ಮ. ೪. ಭಾರತದ ಬಂಗಾರ. == ಪ್ರಶಸ್ತಿ == ೨೦೨೦ - ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡುವ ಸಾಹಿತ್ಯಶ್ರೀ ಪ್ರಶಸ್ತಿ ಜಿಎಸ್ಸೆಸ್ ಪ್ರಶಸ್ತಿ ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ ದೇವದುರ್ಗದ ಖೇಣೆದ್ ಮುರಿಗೆಪ್ಪ ಪ್ರತಿಷ್ಠಾನದಿಂದ ಖೇಣೆದ್‌ ಮುರಿಗೆಪ್ಪ ಸ್ಮಾರಕ ಪ್ರಶಸ್ತಿ == ಉಲ್ಲೇಖಗಳು == == ಹೊರಗಿನ ಸಂಪರ್ಕ == ೧. ಸ್ತ್ರೀಮತವನುತ್ತರಿಸಲಾಗದೆ? ಪುಸ್ತಕ ಪರಿಚಯ